ನಕ್ಷತ್ರಗಳ ಎಣಿಕೆಯಲ್ಲಿ....ಆ ಹೊತ್ತ ಕಳೆಯಲೆತ್ನಿಸುತ್ತ
ನಾ ನೋಡಿದೆ ಆಕಾಶದತ್ತ
ನಕ್ಷತ್ರಗಳ ಎಣಿಕೆಯಲ್ಲೇ ಕಾಲ ಕಳೆಯುತ್ತ
ಮೌನಿಯಾದೆ, ಒಂಟಿಯಾದೆ
ಎದೆಯಾಳದ ಮಡುಗಟ್ಟಿದ ನೆನಪೆಲ್ಲವೂ
ರೆಕ್ಕೆ-ಪುಕ್ಕ ಕಟ್ಟಿಕೊಂಡು
ಸ್ವಚ್ಛಂದವಾಗಿ ಹಾರಾಡತೊಡಗಿದ್ದವು
ಬಾಲ್ಯದಲ್ಲಿನ ಕಡುಬಡತನ ನೀಗಲು
ಮಾಡಿದ್ದು ಹತ್ತು-ಹಲವು ದಾರಿ
ಮಾರಿದ್ದು ಅವೆಷ್ಟೋ ಹಣ್ಣು-ತರಕಾರಿ
ಆ ಹಣದಲ್ಲೂ ಕುಡಿಯುತ್ತಿದ್ದ ಅಪ್ಪ
ಮೂಕ ರೋದನೆಯ "ಅಮ್ಮ"
ಸೆಣೆಸಾಟದಲ್ಲೇ ಸಾಗಿದ ಬದುಕಿಗೆ
ಅವೆಷ್ಟೋ ತಿರುವುಗಳು
ವ್ಯವಸ್ಥೆಯಿಲ್ಲದ ಗೌರ್ಮೆಂಟ್ ಶಾಲೆಗೆ
ಓದಿನಲ್ಲಿ ನಾನೇ ಮೊದಲಿಗಳು
ಯಾರೋ ಹಾಕಿ ಬಿಟ್ಟು-ಕೊಟ್ಟ
ಬಟ್ಟೆಯ ಧಿರಿಸು
ಗೆಳತಿಯರ ರಂಗು-ರಂಗಿನ
ಬಟ್ಟೆಗಳನ್ನು ಕಂಡಾಗ ಆಸೆಯಾಗುತ್ತಿತ್ತು
ನನಗೂ ಹಾಕಲು ಇದ್ದಿದ್ದರೆ......?
ಢಂ ಎನ್ನುವ ಗುಡುಗು ಬಂದಾಗ
ಅಮ್ಮನ ಮಡಿಲಿಗೇರುತ್ತಿದ್ದೆ
ಹುಲ್ಲಿನ ಗುಡಿಸಲ ತುಂಬಾ ತೂತಗಳು
ಮಣ್ಣ ನೆಲದ ಮೇಲೆ ಮಲಗಿದರೆ
"ಮಾಡಿ"ರದ ಗುಡಿಸಲಿನಿಂದ
ಆಕಾಶದ ತುಂಬಾ
ನಕ್ಷತ್ರಗಳನ್ನೇ ಎಣಿಸಬಹುದಿತ್ತು
ಹಸಿವನ್ನು ತಾಳಲು ಸಾದ್ಯವೇ ಇಲ್ಲದಿದ್ದಾಗ ನೀಗುತ್ತಿತ್ತು
ಹಲಸು,ಪೇರಲೆ,ನೇರಲೆಗಳ ಕೃಪೆಯಿಂದ
ಕಾಲ ಬದಲಾಗಿದೆ,
ಅಪ್ಪನ ಬಲ ಕಡಿಮೆಯಾಗಿದೆ
ಜೊತೆಗೆ ಕುಡಿತವೂ..
ಮನಸು, ಯೋಚನೆಗಳು ಮಾತ್ರ
ನಕ್ಷತ್ರ ಗಳ ಎಣಿಕೆಯಲ್ಲೇ ಇವೆ
ನನ್ನಂತವರು ಎಷ್ಟು ಮಂದಿಯೋ...
ಮ೦ಜುಳ, ನಿಮ್ಮನ್ನು ಸಮಯ ಟಿವಿಯಲ್ಲಿ ನೋಡಿದ್ದೇನೆ, ನಿಮ್ಮ ಮೊದಲ ಕವಿತೆಯಲ್ಲಿಯೇ ಮನದ ಭಾವನೆಗಳನ್ನು ಅಚ್ಚುಕಟ್ಟಾಗಿ ಪದಗಳಿಗಿಳಿಸುವಲ್ಲಿ ಯಶಸ್ವಿಯಾಗಿರುವಿರಿ. ನಿಮ್ಮ ಕವನ ಕೃಷಿ ಹೀಗೆಯೇ ಮು೦ದುವರೆಸಿ, ಶುಭವಾಗಲಿ.
ReplyDeleteManjula Akka nanu ninna kaviteyannu nodi matu barade mookanade. Akka ninage devaru yavattigu kai bidolla. ninna dariyalli yaude adetadegalu baradirali endu a devaralli prartisuttene. Akka ninna pritiya tammanad Rohit.D.Itakannavar. I am studying in Dharwad K.U.D.University Mass communication & Journalism.
ReplyDeletejeeva seleyalina kavana aagaada anubhavadali moodi banda saalugalu kathe kattikoduttade...
ReplyDeleteಚೆನ್ನಾಗಿದೆ ಮೇಡಂ
ReplyDelete